ಮನ್ಮಥಸ್ವಾಮಿ
ಮಹಾರಾಷ್ಟ್ರದ ಪ್ರಸಿದ್ಧ ವೀರಶೈವ ಸಂತ. ಈತ ಬರೆದ ಅಭಂಗಗಳು ಮಹಾರಾಷ್ಟ್ರದಲ್ಲಿ ಹೆಚ್ಚು ಜನಪ್ರಿಯವಾಗಿವೆ. ಸಂಸ್ಕøತದಲ್ಲಿ ಪರಮ ರಹಸ್ಯ ಎಂಬ ಬಲುದೊಡ್ಡ ಧರ್ಮಗ್ರಂಥವನ್ನು ಬರೆದಿದ್ದಾನೆ. ಈತ ಹುಲಿಗಳನ್ನು ಪಳಗಿಸಿ ಸವಾರಿಮಾಡಿದಂತೆ ಕಥೆಗಳಿವೆ. ಈತನ ಮಠ ಪಂಢರಾಪುರದಲ್ಲಿದೆ. ಮಹಾರಾಷ್ಟ್ರದಲ್ಲಿ ಈತನಿಗೆ ಅಸಂಖ್ಯಾತ ಶಿಷ್ಯರಿದ್ದರು. ಆ ನಾಡಿನಲ್ಲಿ ಶಿವಶರಣರ ತತ್ತ್ವ ಪ್ರಚಾರದಲ್ಲಿ ಈತನ ಪಾತ್ರ ಅಧಿಕವಾದುದು.
(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ